ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಎರಡು ಹಸುಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ ಹುಲಿ ಚಲನವಲನ ಪತ್ತೆಯಾಗಿದ್ದು ಈಗಲ್ ಡ್ರೋನ್ ಬಳಸಿದ್ದ ಅರಣ್ಯ ಸಿಬ್ಬಂದಿಗಳಿಗೆ ದಟ್ಟ ಪೊದೆಯಲ್ಲಿ ವ್ಯಾಘ್ರ ವಿರಮಿಸುತ್ತಿರುವ ದೃಶ್ಯ ಲಭ್ಯವಾಗಿದೆ. ಎರಡು ಹಸುಗಳ ಮೇಲೆ ದಾಳಿ ಮಾಡಿದ ಹುಲಿ ಸೆರೆ ಕಾರ್ಯಾಚಣೆಗಿಳಿದಿರುವ ಅರಣ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಡ್ರೋನ್ ಜೊತೆಗೆ ಈಗಲ್ ಡ್ರೋನ್ ಬಳಕೆ ಮಾಡಿದೆ. ಇದರಲ್ಲಿ ಎರಡು ಹುಲಿ ಚಲನವಲನ ಕಂಡು ಬಂದಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.