ಕಲಬುರಗಿ: ಮಕ್ಕಳ ಹಕ್ಕುಗಳ ರಕ್ಷಣೆಯೇ ಸಮಾಜದ ಶಕ್ತಿ: ನಗರದಲ್ಲಿ ಪೊಲೀಸ್ ಆಯುಕ್ತ ಶರಣಪ್ಪ
ಕಲಬುರಗಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಕ್ಕಳ ಹಕ್ಕುಗಳ ಜಾಗೃತಿ ಅಭಿಯಾನ ಮತ್ತು ಮಾಸೋತ್ಸವ–2025 ಕಾರ್ಯಕ್ರಮಕ್ಕೆ ನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ., ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳ ಮಹತ್ವ ಮತ್ತು ಅವರನ್ನು ರಕ್ಷಿಸುವ ಕಾನೂನುಗಳ ಕುರಿತು ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸಿದರು. ಸೋಮವಾರ 1 ಗಂಟೆವರೆಗೆ ಜಾಗೃತಿ ಅಭಿಯಾನ ಮತ್ತು ಮಾಸೋತ್ಸವ ಕುರಿತಾದ ನಾನಾ ಕಾರ್ಯಕ್ರಮಗಳು ಜರಗಿದವು..