ಹುಬ್ಬಳ್ಳಿ ನಗರ: ನಗರದಲ್ಲಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಮಹೇಶ್ ಟೆಂಗಿನಕಾಯಿ
ಹುಬ್ಬಳ್ಳಿ:  ಶ್ರೀರಾಮ್ ಫೌಂಡೇಶನ್ ಹಾಗೂ ಶ್ರೀರಾಮ್ ಸೇವಾ ಸಂಕಲ್ಪ ವತಿಯಿಂದ ಹುಬ್ಬಳ್ಳಿಯ ಸವಾಯಿಗಂಧರ್ವ ಸಭಾಭವನದಲ್ಲಿ ಜರುಗಿದ "ವಿದ್ಯಾರ್ಥಿ ವೇತನ ವಿತರಣಾ" ಕಾರ್ಯಕ್ರಮವನ್ನು ಶಾಸಕರಾದ ಮಹೇಶ್ ಟೆಂಗಿನಕಾಯಿ ಅವರು ಉದ್ಘಾಟಿಸಿದರು. ಅನೇಕ ವರ್ಷಗಳಿಂದ ತನ್ನ CSR  ಅನುದಾನದಡಿಯಲ್ಲಿ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ವಾಣಿಜ್ಯ ವಾಹನಗಳ ಚಾಲಕರು, ಕ್ಲೀನರ್ಸ್ ಹಾಗೂ ಸಾರಿಗೆ ವ್ಯವಸ್ಥೆಯಡಿಯಲ್ಲಿ ಬರುವ ಕೂಲಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುತ್ತಿರುವ ಕಂಪನಿಯ ಕಾರ್ಯವನ್ನು ಶ್ಲಾಘಿಸಿದರು.  ಈ ಸಂದರ್ಭದಲ್ಲಿ ಕಂಪನಿಯ ಹುಬ್ಬಳ್ಳಿ ವಲಯದ ಅಧಿಕಾರಿಗಳು ಸೇರಿದಂತೆ ಉಪಸ್ಥಿತಿ ಇದ್ದರು.