ಚಳ್ಳಕೆರೆ: ಹಾಲಿನ ಪಾಕೇಟ್ ಗಳು ಕಳ್ಳತನ ಮಾಡುವ ವ್ಯಕ್ತಿ; ನಗರದ ಅಜ್ಜನಗುಡಿ ರಸ್ತೆಯಲ್ಲಿ ಘಟನೆ
ನಗರದ ಅಜ್ಜಯ್ಯನಗುಡಿ ರಸ್ತೆಯಲ್ಲಿ ಹಾಲಿನ ಪಾಕೇಟ್ ಗಳನ್ನು ವ್ಯಕ್ತಿಯೊಬ್ಬ ಕಳ್ಳತನ ಮಾಡಿಕೊಂಡು ಹೋಗುವ ಘಟನೆಯೊಂದು ಗುರುವಾರ ಬೆಳಕಿಗೆ ಬಂದಿದೆ. ಹಾಲಿನ ಪಾಕೇಟ್ ಗಳು ಪ್ರತಿದಿನ ಕಳ್ಳತನವಾಗುವುದನ್ನು ಕಂಡ ಹಾಲಿನ ಪಾಕೇಟ್ ಮಾರಾಟಗಾರ ಅಕ್ಕಪಕ್ಕದ ಅಂಗಡಿಗಳಲ್ಲಿ ಸಿಸಿ ಕ್ಯಾಮರಾಗಳ ಪರಿಶೀಲನೆ ಮಾಡಿದಾಗ ವ್ಯಕ್ತಿಯೊಬ್ಬ ಹಾಲಿನ ಪಾಕೇಟ್ ಗಳು ಲಾರಿಯಲ್ಲಿ ಇಳಿಸಿ ಹೋಗುವ ಸಮಯವನ್ನು ಕಾದು, ಹಾಲಿನ ಪಾಕೇಟ್ ಗಳು ಕಳ್ಳತನ ಮಾಡಿಕೊಂಡು ಪರಾರಿಯಾಗುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಇನ್ನು ಕಳ್ಳತನದ ವಿಡಿಯೋ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.