ಜೇವರ್ಗಿ: ಇಜೇರಿ ಗ್ರಾಮದಲ್ಲಿ ಮನೆಗೆ ನುಗ್ಗಿ ಬ್ಲೇಡ್ನಿಂದ ಮಹಿಳೆ ಕತ್ತು ಕೊಯ್ದು ದರೋಡೆ
ಕಲಬುರಗಿ : ಬ್ಲೇಡ್ನಿಂದ ಮಹಿಳೆಯ ಕತ್ತು ಕೊಯ್ದು ದರೋಡೆ ಮಾಡಿದ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದಲ್ಲಿ ನಡೆದಿದ್ದು, ಡಿ2 ರಂದು ಬೆಳಗ್ಗೆ 8 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಗ್ರಾಮದ ಅಮೀರ್ ಬಿ ಮನೆಗೆ ನುಗ್ಗಿದ ಕಳ್ಳರು, ಬ್ಲೇಡ್ನಿಂದ ಅಮೀರ್ ಬಿ ಯ ಕತ್ತು ಕೊಯ್ದು ಆಕೆಯ ಮೈಮೇಲಿದ್ದ 60 ಗ್ರಾಂನಷ್ಟು ಚಿನ್ನಾಭರಣ ಹಾಗೂ ಮನೆಯಲ್ಲಿನ 1 ಲಕ್ಷ ರೂ ನಗದು ಹಣ ದರೋಡೆ ಮಾಡಿಕೊಂಡು ಹೋಗಿದ್ದಾರೆ. ಗಾಯಾಳು ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ