ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಸೌದತ್ತಿ ರೇಣುಕಾ ದೇವಿ ದರ್ಶನ ತೆರಳುವ ಭಕ್ತಾದಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಗೌರಿ ಹುಣ್ಣಿಮೆಯಂದು ಹಾಗೂ ಛಟ್ಟಿ ಅಮವಾಸ್ಯೆವರೆಗೆ ಪ್ರತಿ ಶುಕ್ರವಾರ,ರವಿವಾರ ಮತ್ತು ಮಂಗಳವಾರದಂದು ಹುಬ್ಬಳ್ಳಿ ಹಾಗೂ ನವಲಗುಂದದಿಂದ ಯಲ್ಲಮ್ಮನ ಗುಡ್ಡಕ್ಕೆ ನೇರವಾಗಿ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಶೀಗಿ ಹುಣ್ಣಿಮೆಯಿಂದ ದೀಪಾವಳಿ ಅಮವಾಸೆಯವರೆಗಿನ ಅವಧಿಯಲ್ಲಿ ಮಾಡಲಾಗಿದ್ದ ವಿಶೇಷ ಬಸ್ ಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. 40 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು, ಸಾರ್ವಜನಿಕರು ಪ್ರಯಾಣ ಮಾಡಿದ್ದಾರೆ. ರೇಣುಕಾದೇವಿ ದರ್ಶನಕ್ಕೆ ಹೋಗಿಬರಲು ಈ ವಿಶೇಷ ಬಸ್ ಗಳಿಂದ