ಹೊಸನಗರ: ಗೋಪೂಜೆ ಭಾರತೀಯ ಧರ್ಮಪರಂಪರೆಯ ಮಹತ್ವವನ್ನು ಸಾರುತ್ತವೆ, ಹೊಂಬುಜದಲ್ಲಿ ಡಾ. ದೇವೇಂದ್ರಕೀರ್ತಿ ಭಟ್ಟಾರಕ
ಹಾಲನ್ನು ನಿಸ್ವಾರ್ಥವಾಗಿ ನೀಡುತ್ತಿರುವ ಗೋವುಗಳು ಜನಸಮುದಾಯವನ್ನು ಪೋಷಣೆ ಮಾಡುವ ಮಾತೆ. ದೀಪಾವಳಿಯ ಬಲಿಪಾಡ್ಯಮಿ ಸುದಿನದಂದು ಗೋಪೂಜೆ ಸಂಸ್ಕಾರವು ಭಾರತೀಯ ಧರ್ಮಪರಂಪರೆಯ ಮಹತ್ವವನ್ನು ಸಾರುತ್ತವೆ” ಎಂದು ಹೊಂಬುಜ ಶ್ರೀಕ್ಷೇತ್ರ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಹೊಸನಗರ ತಾಲೂಕಿನ ಹೊಂಬುಜ ಕ್ಷೇತ್ರದ ಗೋಶಾಲೆಯಲ್ಲಿ ಗೋವುಗಳಿಗೆ ಪೂಜಾ ನೆರವೇರಿಸಿ ಬುಧವಾರ ಸಂಜೆ 5 ಗಂಟೆಗೆ ಮಾತನಾಡಿದ ಅವರು, ಕಾಮಧೇನು ಎಂಬ ಪವಿತ್ರ ಭಾವನೆಯೊಂದಿಗೆ ಕೃಷಿಕರು ಗೋವುಗಳನ್ನು ಆರೈಕೆ ಮಾಡುವಂತಾಗಲು ಗೋಪೂಜೆಯಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ” ಎಂದರು.