ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ಮೆಕ್ಕೆಜೋಳಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ದುರ್ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಗ್ರಾಮದ ರೈತರಾದ ಕನಕಪ್ಪ ಹನಮಪ್ಪ ಹಿರೇಹಾಳ ಅವರ ಹೊಲದಲ್ಲಿ ಬೆಳೆದಿದ್ದ ಅಂದಾಜು 90ಕ್ವಿಂ.ಮೆಕ್ಕೆಜೋಳದ ತೆನೆಗಳಿಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹೆಚ್ಚಿದ್ದರಿಂದ ಮೆಕ್ಕೆಜೋಳ ಹುಟ್ಟು ಭಸ್ಮವಾಗಿದೆ. ಮೆಕ್ಕೆಜೋಳದ ತೆನೆಗಳನ್ನು ರಾಶಿ ಮಾಡಲು ಹಾಕಿದ್ದ ತೆನೆಗಳ ಗುಂಪಿಗೆ ಹೊಲದಲ್ಲಿ ರಾತ್ರಿ ಯಾರೂ ಇಲ್ಲದಿರುವುದನ್ನು ನೋಡಿಕೊಂಡು ದುಷ್ಟರು ಬೆಂಕಿ ಹಚ್ಚಿದ್ದಾರೆ.