ಭಟ್ಕಳ: ನಗರಕ್ಕೆ ಚಿನ್ನಾಭರಣ ಖರೀದಿಸಲು ಬಂದಿದ್ದ ಕುಮಟಾದ ಯುವಕ ನಾಪತ್ತೆ
ಮದುವೆಗೆ ಚಿನ್ನ ಖರೀದಿಗೆ ಹೋಗಿದ್ದ ಯುವಕ ಭಟ್ಕಳದಲ್ಲಿ ನಾಪತ್ತೆ! ಕುಮಟಾ: ಮದುವೆ ನಿಮಿತ್ತ ಚಿನ್ನಾಭರಣ ಖರೀದಿಸಲು ಕುಟುಂಬದವರೊಂದಿಗೆ ಭಟ್ಕಳಕ್ಕೆ ಬಂದಿದ್ದ ಯುವಕನೊಬ್ಬ ಕಾಣೆಯಾಗಿರುವ ಘಟನೆ ವರದಿಯಾಗಿದೆ. ಈ ಕುರಿತು ಯುವಕನ ಸಹೋದರ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಣೆಯಾದ ಯುವಕನನ್ನು ಕುಮಟಾ ತಾಲೂಕಿನ ಚಿತ್ರಗಿ ನಿವಾಸಿ ಜಾಕೀರ ಬೇಗ (32) ಎಂದು ತಿಳಿದು ಬಂದಿದ್ದು,ಹೊರದೇಶದಲ್ಲಿ ಕೆಲಸ ಮಾಡುತಿದ್ದ.ತನ್ನ ಕುಟುಂಬದವರೊಡನೆ ಮದುವೆ ನಿಮಿತ್ತ ಚಿನ್ನಾಭರಣ ಖರೀದಿಸಲು ಭಟ್ಕಳ ಗೆ ಆಗಮಿಸಿದ್ದ ಸಂದರ್ಭದಲ್ಲಿ ನಾಪತ್ತೆ ಯಾಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ಈತನ ತಮ್ಮ ಪ್ರಕರಣ ದಾಖಲಿಸಿದ್ದಾನೆ