ಬೆಂಗಳೂರು ದಕ್ಷಿಣ: ಮಾಲ್, ಐಟಿಬಿಟಿ ಕಂಪನಿಗಳಲ್ಲಿ ಹೈ ಅಲರ್ಟ್, ಮೆಟಲ್ ಡಿಟೆಕ್ಟರ್ ಇಂದ ಚೆಕ್ ಮಾಡಲಾಗ್ತಿದೆ
- ಡಿಸಿಪಿ ಸಾರಾಫಾತೀಮಾ
ರಾಜ್ಯಾದ್ಯಂತ ಹೈ ಅಲರ್ಟ್ ಇರಲು ಕೇಂದ್ರ ಗೃಹ ಸಚಿವಾಲಯದಿಂದ ಎಲ್ಲಾ ರಾಜ್ಯಗಳಿಗೂ ಸೂಚನೆ ಹೊರಡಿಸಲಾಗಿದೆ. ಕೇಂದ್ರ ತನಿಖಾ ಸಂಸ್ಥೆಗಳು ರಾಜ್ಯದಲ್ಲಿ ಅಲರ್ಟ್ ಆಗಿವೆ. ನಗರಗಳ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ನಿಗಾವಹಿಸಲಾಗಿದೆ. ರೈಲ್ವೇ ನಿಲ್ದಾಣ, ಮಾಲ್, ಹೋಟೆಲ್ ಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ.. ಸ್ಥಳೀಯ ಪೊಲೀಸರಿಂದಲೂ ನಿಗಾವಹಿಸಲಾಗಿದೆ. ಈ ಬಗ್ಗೆ ಮೇ 8ರಂದು ಬೆಳಗ್ಗೆ 11ಗಂಟೆಗೆ ಕೋರಮಂಗಲದ ಕಚೇರಿಯಲ್ಲಿ ಮಾಹಿತಿ ನೀಡಿರುವ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ನಮ್ಮ ವ್ಯಾಪ್ತಿಯಲ್ಲಿ ಎಲ್ಲಾ ಕಡೆ ನಿಗಾವಹಿಸಲಾಗಿದೆ. ಹೆಚ್ಚಿನ ಬೀಟ್ ವ್ಯವಸ್ಥೆ ಮಾಡಲಾಗಿದೆ. ಮಾಲ್ ಗಳು, ಐಟಿಬಿಟಿ ಕಂಪನಿಗಳ ಬಳಿ ನಿಗಾವಹಿಸಲಾಗಿದೆ. ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ, ಹೆಚ್ಚಿನ ಭದ್ರತೆ ವಹಿಸಲಾಗಿದೆ ಎಂದರು