ಹಿರಿಯೂರು: ತಾಲ್ಲೂಕಿನ ಕಲ್ವಹಳ್ಳಿ ಭಾಗದ ದಿಂಡಾವರ ಗ್ರಾಮದಲ್ಲಿ ಜನರಲ್ಲಿ ಚರ್ಮತುರಿಕೆ ರೋಗ ಪತ್ತೆ
ತಾಲ್ಲೂಕಿನ ಕಲ್ವಳ್ಳಿಯ ಭಾಗದ ದಿಂಡಾವರ ಗ್ರಾಮದಲ್ಲಿ ಸಾಂಕ್ರಾಮಿಕ ರೋಗವಾದ ವಿಚಿತ್ರ ಚರ್ಮತುರಿಕೆ ರೋಗ ಇಡೀ ಊರಿನ ಅರ್ಧ ಜನಗಳಿಗೆ ಹರಡಿರುವುದು ಮಂಗಳವಾರ ಬೆಳಕಿಗೆ ಬಂದಿದೆ.ತಾಲ್ಲೂಕಿನ ಕಲ್ವಳ್ಳಿಭಾಗದ ದಿಂಡಾವರ ಗ್ರಾಮದಲ್ಲಿ ವಿಚಿತ್ರ ಸಾಂಕ್ರಾಮಿಕ ರೋಗವಾದ ಚರ್ಮಬೇನೆ ಹಾಗೂ ಚರ್ಮದ ತುರಿಕೆ ಇಡೀ ಊರಿನ ಅರ್ಧ ಜನಗಳಿಗೆ ಆಗಿದ್ದು, ಈ ಬಗ್ಗೆ ಗ್ರಾಮದ ಜನರಲ್ಲಿ ತೀವ್ರ ಆತಂಕ ಮನೆಮಾಡಿದೆ ಎಂಬುದಾಗಿ ಗ್ರಾಮದ ಮುಖಂಡರಾದ ಡಿ.ಚಂದ್ರಯ್ಯ ಮಾಹಿತಿ ನೀಡಿದ್ದಾರೆ.