ಗುಬ್ಬಿ: ಪೌರಕಾರ್ಮಿಕರ ಮೇಲೆ ಹೂವಿನ ಮಳೆ ಸುರಿಸಿದ ಗುಬ್ಬಿ ಪೌರ ಅಧಿಕಾರಿಗಳು
Gubbi, Tumakuru | Sep 23, 2025 ಗುಬ್ಬಿ ಪಟ್ಟಣ ಪಂಚಾಯಿತಿ ವತಿಯಿಂದ ಪೌರಕಾರ್ಮಿಕರ ದಿನಾಚರಣೆಯನ್ನು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಸಂಜೆ 5 ಗಂಟೆಯಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪಟ್ಟಣವನ್ನು ಸ್ವಚ್ಛವಾಗಿಡುವುದರಲ್ಲಿ ಪೌರಕಾರ್ಮಿಕರ ಪ್ರಮುಖ ಪಾತ್ರವನ್ನು ಮುಖ್ಯ ಎಂದು ಮುಖ್ಯ ಅಧಿಕಾರಿ ಮಂಜುಳಾದೇವಿ ಶ್ಲಾಘಿಸಿದರು. ಪೌರಕಾರ್ಮಿಕರ ಮೇಲೆ ಹೂವನ್ನು ಹಾಕುವ ಮೂಲಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.