ಹುಬ್ಬಳ್ಳಿ: ಕೇಶ್ವಾಪುರದ ಉದಯನಗರದ ಮನೆಯೊಂದರಲ್ಲಿ ೨೫ ಲಕ್ಷ ಮೌಲ್ಯದ ೨೫೦ ಗ್ರಾಂ ಬಂಗಾರ ಕಳ್ಳತನ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಮನೆ ಕೆಲಸಕ್ಕೆ ಬರುತ್ತಿದ್ದ ವ್ಯಕ್ತಿಯ ವಿರುದ್ಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಮೃತರಾಜ್ ಪಾಟೀಲ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ೨೦೨೪ ಮಾರ್ಚ್ ೧೦ ರಿಂದ ೨೦೨೫ ಅಕ್ಟೋಬರ್ ೨೧ ರ ಅವಧಿಯಲ್ಲಿ ಕಳ್ಳತನವಾಗಿದೆ ಎನ್ನಲಾಗಿದೆ. ಮನೆಗೆ ಕೆಲಸಕ್ಕೆ ಬರುತ್ತಿದ್ದ ಬಸು ಸುಳ್ಳಪ್ಪಗೌಡರ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಬಸು ಈ ಹಿಂದೆ ಕಳ್ಳತನ ಮಾಡಿಕೊಂಡು ಹೋಗಿದ್ದು, ಅವುಗಳನ್ನು ಮರಳಿ ಕೊಡಲು ಕೇಳಿದಾಗ ಬೇರೆಯವರಿಗೆ ಕೊಟ್ಟಿದ್ದೇನೆ ತಂದು ಕೊಡುತ್ತೇನೆ ಎಂದು ಹೇಳುತ್ತಾ ಬಂದಿದ್ದು, ಇಲ್ಲಿಯವರೆಗೂ ಕೊಟ್ಟಿ