ಬಳ್ಳಾರಿ: ನಗರದಲ್ಲಿ ಶಾಸಕ ಭರತ್ ರೆಡ್ಡಿ, ಸಂಸದ ತುಕಾರಾಂ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಹಾಗೂ ಮಾಜಿ ಸಚಿವ ನಾಗೇಂದ್ರ ಆಪ್ತನ ಮೇಲೆ ಇಡಿ ದಾಳಿ
ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳ ತಂಡ ಬೆಳ್ಳಂ ಬೆಳಿಗ್ಗೆ ಸಂಸದ ಈ.ತುಕಾರಾಂ, ಬಳ್ಳಾರಿ ನಗರ ಶಾಸಕ ನಾರಾ ಭರತ್ ಹಾಗೂ ಕಂಪ್ಲಿ ಶಾಸಕ ಜೇ.ಎನ್.ಗಣೇಶ್ ಹಾಗೂ ಆಪ್ತ ಸಹಾಯಕ ಗೋವರ್ಧನ್ ಅವರ ನಿವಾಸದ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆಗೆ ಮುಂದಾಗಿದ್ದಾರೆ. ಸಂಸದ ಈ.ತುಕಾರಾಂ ಅವರ ಸಂಡೂರಿನ ನಿವಾಸ, ಕಚೇರಿ, ಶಾಸಕ ಜೇ.ಎನ್.ಗಣೇಶ್ ಅವರ ಕಂಪ್ಲಿ ನಿವಾಸ, ಶಾಸಕ ನಾರಾ ಭರತ್ ರೆಡ್ಡಿ ಅವರ ಬಳ್ಳಾರಿಯ ನಿವಾಸ ಸೇರಿದಂತೆ ಗ್ರಾಮೀಣ ಶಾಸಕ ನಾಗೇಂದ್ರ ಅವರ ಆಪ್ತ ಸಹಾಯಕ ಗೋವರ್ಧನ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳ ತಂಡ ಏಕ ಕಾಲಕ್ಕೆ ದಾಳಿ ನಡೆಸಿ, ಶಾಕ್ ನೀಡಿದ್ದಾರೆ.