ಚಿಟಗುಪ್ಪ: ಅಪಾರ ಜನಸಾಗರದ ಮಧ್ಯ ನಡೆದ ಚಾಂಗ್ಲೇರಾ ವೀರಭದ್ರೇಶ್ವರ ರಥೋತ್ಸವ
ತಾಲೂಕಿನ ಇತಿಹಾಸ ಪ್ರಸಿದ್ಧ, ಪವಿತ್ರ ಧಾರ್ಮಿಕ ಕ್ಷೇತ್ರ ಭಕ್ತರ ಇಷ್ಟಾರ್ಥ ಪೂರೈಸುವ, ಚಾಂಗ್ಲೇರಾ ವೀರಭದ್ರೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಗುರುವಾರ ಬೆಳಗಿನ ಜಾವ 2ಕ್ಕೆ ಅಪಾರ ಜನಸಾಗರದ ಮಧ್ಯ ರಥೋತ್ಸವ ನೆರವೇರಿತು. ದೇವರ ಪಲ್ಲಕ್ಕಿ ಉತ್ಸವ ಜತೆಗೆ ವಿಶೇಷ ಅಲಂಕೃತ ರಥೋತ್ಸವ ನಡೆಯಿತು. ಅತ್ಯಾಕರ್ಷಕ ಸುಡುಮದ್ದು, ಭಕ್ತರ ಜಯಘೋಷ, ವೀರಭದ್ರ ಕುಣಿತ ರಥೋತ್ಸವದ ಮೆರಗು ಹೆಚ್ಚಿಸಿದವು. ಬೀದರ್ ಮಾತ್ರವಲ್ಲದೆ ಪಕ್ಕದ ತೆಲಂಗಾಣ ಮತ್ತು ಮಹಾರಾಷ್ಟ್ರದ ಅಪಾರ ಸಂಖ್ಯೆಯ ಭಕ್ತಾದಿಗಳು ರಥೋತ್ಸವಕ್ಕೆ ಸಾಕ್ಷಿಯಾದರು.