ಯಲ್ಲಾಪುರ: ಅಡಿಕೆ ಭವನದಲ್ಲಿ ನಾಮಧಾರಿ ಶಿಕ್ಷಕರ ವರ್ಗ ಹಾಗೂ ನೌಕರರ ಬಳಗದಿಂದ ನಡೆದ ಅಭಿನಂದನಾ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ
ಯಲ್ಲಾಪುರ :ಪಟ್ಟಣದ ಅಡಿಕೆ ಭವನದಲ್ಲಿ ತಾಲ್ಲೂಕಿನ ನಾಮಧಾರಿ ಶಿಕ್ಷಕ ವರ್ಗ ಮತ್ತು ನೌಕರರ ಬಳಗದ ವತಿಯಿಂದ ನಡೆದ ಅಭಿನಂದನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಚೇರಿಯ ನಿರ್ದೇಶಕ ಈಶ್ವರ ನಾಯ್ಕ ಮಾತನಾಡಿ ವ್ಯಕ್ತಿಯ ಬೆಳವಣಿಗೆಗೆ ಸಮಾಜದ ಆಶ್ರಯ ಅವಶ್ಯಕ ಎಂದರು.ಶಾಲಾ ಶಿಕ್ಷಣ ಇಲಾಖೆ ಶಿರಸಿಯ ಉಪನಿರ್ದೇಶಕ ಡಿ. ಆರ್. ನಾಯ್ಕ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ,ಪ ಪಂ ಅಧ್ಯಕ್ಷೆ ನರ್ಮದಾ ನಾಯ್ಕ ಇತರರು ಇದ್ದರು.