ಶ್ರೀವಾಸವಿ ಪುಡ್ಸ್ ವತಿಯಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ 26ನೇ ವರ್ಷದ ಅವರೆಬೇಳೆ ಮೇಳವನ್ನು ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜನವರಿ 4ರವರೆಗೆ ನಡೆಯಲಿರುವ ಈ ಮೇಳದಲ್ಲಿ ರೈತರು ಬೆಳೆದ ಅವರೆಕಾಯಿಯನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲಾಗುತ್ತಿದ್ದು, ಅವರೆಕಾಯಿಯಿಂದ ತಯಾರಿಸಿದ ವೈವಿಧ್ಯಮಯ ಹಾಗೂ ವಿಶಿಷ್ಟ ಆಹಾರ ಪದಾರ್ಥಗಳು ಬೆಂಗಳೂರು ನಗರದ ಆಹಾರ ಪ್ರಿಯರ ಮನ ಗೆಲ್ಲುತ್ತಿವೆ. ಬೆಂಗಳೂರು ಸುತ್ತಮುತ್ತಲಿನ ರೈತರು ಬೆಳೆದ ತಾಜಾ ಅವರೆಕಾಯಿ ಸವಿಯನ್ನು ಸವಿಯಲು ಅನೇಕರು ಮೇಳಕ್ಕೆ ಆಗಮಿಸಿದ್ದಾರೆ. ಕಳೆದ 25 ವರ್ಷಗಳಿಂದ ಶ್ರೀವಾಸವಿ ಪುಡ್ಸ್ ರೈತರು ಮತ್ತು ನಗರ ನಾಗರಿಕರು ಒಂದಾಗಿ ಸಂಭ್ರಮಿಸಲು ಈ ಅವರೆಬೇಳೆ ಮೇಳವನ್ನು ನಿರಂತರವಾಗಿ ಆಯೋಜಿಸುತ್