ಬೆಂಗಳೂರು ದಕ್ಷಿಣ: ಏಷ್ಯಾ ಕಪ್ನಲ್ಲಿಂದು ಇಂಡೋ - ಪಾಕ್ ಮುಖಾಮುಖಿ ವಿರೋಧಿಸಿ ಜಯನಗರದಲ್ಲಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ
ಏಷ್ಯಾ ಕಪ್ನಲ್ಲಿ ಸೆಪ್ಟೆಂಬರ್ 14ರಂದು ಭಾರತ - ಪಾಕಿಸ್ತಾನ ಮುಖಾಮುಖಿಯನ್ನ ವಿರೋಧಿಸಿ ಕಾಂಗ್ರೆಸ್ನ ಮಹಿಳಾ ಘಟಕದ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ. ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ನೇತೃತ್ವದಲ್ಲಿ ಸಂಜೆ 7 ಗಂಟೆಗೆ ಜಯನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಂಧೂರ, ಕ್ಯಾಂಡೆಲ್, ಪೆಹಲ್ಗಾಮ್ ದಾಳಿಯ ಫೋಟೋಗಳನ್ನ ಹಿಡಿದು ಆಕ್ರೋಶ ವ್ಯಕ್ತಪಡಿಸಲಾಯಿತು.ಪಾಕ್ ವಿರುದ್ಧ ಕ್ರಿಕೆಟ್ ಆಡಲು ಕೇಂದ್ರ ಸರ್ಕಾರ ಅವಕಾಶ ನೀಡಿರುವುದು ಮಹಿಳೆಯರ ಸಿಂಧೂರಕ್ಕೆ ಮಾಡಿದ ಅಪಮಾನ.ಸದಾ ದೇಶದ ಪರ ಎನ್ನುವ ಬಿಜೆಪಿಯ ಅಸಲಿ ಮುಖ ಇದು ಎಂದು ಸೌಮ್ಯಾ ರೆಡ್ಡಿ ಆಕ್ರೋಶ ಹೊರಹಾಕಿದರು.