ಶಿವಮೊಗ್ಗ: ಹಳೇ ದ್ವೇಷದ ಹಿನ್ನೆಲೆ ಯುವಕನ ಕೊಲೆ, ಕೊಲೆ ಆರೋಪಿಗೆ 7 ವರ್ಷ ಶಿಕ್ಷೆ ವಿಧಿಸಿ ಶಿವಮೊಗ್ಗ ಕೋರ್ಟ್
ಹಳೇ ದ್ವೇಷದ ಹಿನ್ನೆಲೆ ಬಾಪೂಜಿನಗರ ನಗರದ ಯುವಕನನ್ನ ಕೊಲೆ ಮಾಡಿದ ಆರೋಪಿಗೆ 7 ವರ್ಷ ಶಿಕ್ಷೆ ವಿಧಿಸಿ ಶಿವಮೊಗ್ಗದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಬುಧವಾರ ಸಂಜೆ 5 ಗಂಟೆಗೆ ತೀರ್ಪು ನೀಡಿದೆ. ಶಿವಮೊಗ್ಗ ನಗರದ ಬಾಪೂಜಿ ನಗರ 21 ವರ್ಷದ ರಾಹಿಲ್ ಎಂಬ ಯುವಕನನ್ನ ಅಜ್ಗರ್ ಖಾನ್ ಎಂಬುವನು 2021 ರಲ್ಲಿ ಕೊಲೆ ಮಾಡಿದ್ದ. ಈತನ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆ ಕೋರ್ಟ್ 7 ವರ್ಷ ಶಿಕ್ಷೆ ವಿಧಿಸಿ ಆದೇಶ ಮಾಡಿದೆ. ನ್ಯಾಯಾಧೀಶರಾದ ಯಶವಂತ್ ರವರು ಆರೋಪಿಗೆ 7 ವರ್ಷ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.