ಕುಮಟಾ: ಗೋಕರ್ಣದ ಓಂ ಕಡಲ ತೀರದಲ್ಲಿ ಸೆಲ್ಫಿ ಹುಚ್ಚಿಗೆ ಶಿವಮೊಗ್ಗದ ಪ್ರವಾಸಿಗ ಬಲಿ
ಕುಮಟಾ : ಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣದ ಓಂ ಕಡಲ ತೀರದಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಪ್ರವಾಸಿಗನೋರ್ವ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಶಿವಮೊಗ್ಗದ ಅಸ್ಲಾಂ (45) ಮೃತ ಪ್ರವಾಸಿಗನೆಂದು ತಿಳಿದುಬಂದಿದೆ. ಶುಕ್ರವಾರ ಒಟ್ಟು 10 ಜನರ ತಂಡ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಬಂದಿದ್ದರು. ಓಂ ಕಡಲತೀರಕ್ಕೆ ತೆರಳಿ ಸೆಲ್ಸಿ ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದಾರೆ. ತೀರ ಮುಂದಕ್ಕೆ ತೆರಳಿದ್ದ ಅಸ್ಲಾಂ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.