ಗುಬ್ಬಿ: ಗುಬ್ಬಿಯಲ್ಲಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಎಲೆಕ್ನಿಕ್ ವಾಹನ
Gubbi, Tumakuru | Sep 26, 2025 ಗುಬ್ಬಿ ಪಟ್ಟಣದ ಕೋಳಿ ಅಂಗಡಿ ಬಳಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಇದ್ದಕ್ಕಿದ್ದಂತೆ ಭಾರಿ ಶಬ್ದ ಬಂದು ನಂತರ ಬೆಂಕಿ ಕಾಣಿಸಿಕೊಂಡಿರುವಂತಹ ಘಟನೆ ಶುಕ್ರವಾರ ಸಂಜೆ 5:00 ಸಂದರ್ಭದಲ್ಲಿ ನಡೆದಿದೆ ಅಂಗಡಿ ಮುಂಭಾಗದಲ್ಲಿದ್ದ ವಾಹನವನ್ನು ತಕ್ಷಣ ಸವಾರ ಅದನ್ನು ರಸ್ತೆ ಬದಿಗೆ ತಳ್ಳಿ ಓಡಿ ಹೋಗಿದ್ದಾನೆ. ನೋಡ ನೋಡುತ್ತಿದ್ದಂತೆ ಬೈಕ್ ಹೊತ್ತಿ ಉರಿದು ಭಸ್ಮವಾಗಿದೆ. ಇದನ್ನು ಕಂಡ ನಾಗರಿಕರು ಭಯಭೀತರಾಗಿದ್ದಾರೆ.