ಯಲ್ಲಾಪುರ :ರಾಷ್ಟ್ರೀಯ ಹೆದ್ದಾರಿ ಮಿಲನ್ ಹೋಟೆಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಲಾರಿ ಪಲ್ಟಿಯಾಗಿ ಅದರಲ್ಲಿದ್ದ ಸಿಮೆಂಟ್ ತುಂಬಿದ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದ ಘಟನೆ ನಡೆದಿದೆ.ಚಾಲಕ ನಿರ್ವಾಹಕ ನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯ ದಿಂದ ಪಾರಾಗಿದ್ದಾರೆ. ಲಾರಿಯು ಕೊಪ್ಪಳ ದಿಂದ ಸಿಮೆಂಟ್ ತುಂಬಿಕೊಂಡು ಕೇರಳಕ್ಕೆ ತೆರಳುತ್ತಿತ್ತು.ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದರು. ರಸ್ತೆ ಮಧ್ಯಯೇ ಲಾರಿ ಪಲ್ಟಿ ಯಾಗಿದ್ದರಿಂದ ಕೆಲ ಕಾಲ ಸಂಚಾರ ವ್ಯತ್ಯಯವಾಗಿ ಸುಮಾರು 3ಕಿಲೋ ಮೀಟರ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.