ರಾಮನಗರ: ನಮ್ಮ ಭೂಮಿಗೆ ಬೆಲೆ ಕಟ್ಟಲು ನೀವ್ಯಾರು, ಬೈರಮಂಗಲದಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದ ರೈತ ಮಹಿಳೆ.
ಬಿಡದಿ -- ಗ್ರೇಟರ್ ಬೆಂಗಳೂರು ಯೋಜನೆಗೆ ಭೂಸ್ವಾದೀನ ವಿರುದ್ಧ ಖಂಡಿಸಿ ಬಿಡದಿ ಹೋಬಳಿ ಬೈರಮಂಗಲ ಗ್ರಾಮದಲ್ಲಿ ಮಂಗಳವಾರ ವಿಷದ ಬಾಟಲ್ ಹಿಡಿದು ಅತ್ಮಹತ್ಯೆಗೆ ಯತ್ನಿಸಿದ್ದ ರೈತ ಮಹಿಳೆ ರಮ್ಯ, ನಮ್ಮ ಭೂಮಿಗೆ ಬೆಲೆ ಕಟ್ಟಲು ನೀವು ಯ್ಯಾರು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಈ ಸಂದರ್ಭದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ರೈತರ ವಿರೋಧವನ್ನು ಲೆಕ್ಕಿಸಿದೆ ಸರ್ಕಾರ ಬಲವಂತದ ಭೂಸ್ವಾದೀನ ಮುಂದಾಗಿದೆ. ಅಲ್ಲದೇ ಡಿಸಿಎಂ ಡಿ.ಕೆ.ಶಿವಕುಮಾರ ಅವರು ನಿಮ್ಮ ಕೈಲಿ ದಿಕ್ಕಾರ ಮಾತ್ರ ಕೂಗಲು ಸಾಧ್ಯ ಎಂದಿದ್ದಾರೆ. ಹೋರಾಟ ಪ್ರಾರಂಭವಾಗಿ ಹಲವು ದಿನ ಕಳೆದಿದೆ, ನಮ್ಮ ಹೋರಟದಲ್ಲಿ ನಮ್ಮ ಮ