ಕಾರ್ಮಿಕರ ಕಾರ್ಡ್ ಇದ್ರೆ ಮಾತ್ರ ಸರ್ಕಾರ ನೀಡುವ ವಿವಿಧ ಸೌಲಭ್ಯ ಕೇಳುವ ಅಧಿಕಾರ ನಮಗಿರುತ್ತದೆ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಮಾಳಗಿ ಸಲಹೆ ನೀಡಿದರು. ಸರ್ಕಾರದ ವಿವಿಧ ಸೌಲಭ್ಯಗಳ ಕುರಿತು ತಾಲೂಕಿನ ಬೆಳಕೇರಾದಲ್ಲಿ ಸೋಮವಾರ ಸಂಜೆ 5ಕ್ಕೆ ಏರ್ಪಡಿಸಿದ್ದ ಕಾರ್ಮಿಕ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬುಬಾಯಿ ಮಾಳಗೆ, ಶ್ರೀಮಂತ ಚಿಟಗುಪ್ಪ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.