ಬಳ್ಳಾರಿ: ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ₹16 ಲಕ್ಷ ರೂ ಹಣದೊಂದಿಗೆ ಪರಾರಾಯಾಗಿದ್ದ ಎಸ್'ಡಿಎ ವಾಪಸ್ ಆಗಿಲ್ಲ; ನಗರದಲ್ಲಿ ಆರ್'ಟಿಓ ಮಾಹಿತಿ
ಬಳ್ಳಾರಿ ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಲಸ ಮಾಡುವ ದ್ವಿತೀಯ ದರ್ಜೆ ಗುಮಾಸ್ತನೊಬ್ಬ ಖಜಾನೆ ಕಚೇರಿಯಲ್ಲಿ ವಾಹನ ತೆರಿಗೆ ಇತರ ಬಾಬತ್ತುಗಳಿಂದ ಜಮಾ ಆಗಿದ್ದ ₹16,72,518 ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಮಂಗಳವಾರ ಸಂಜೆ 4ಗಂಟೆಗೆ ಮಾಧ್ಯಮದ ಜೊತ ವಿಷಯ ಹಂಚಿಕೊಂಡಿರೋ ಬಳ್ಳಾರಿಯ ಅರ್ಟಿಒ, ಹಣದೊಂದಿಗೆ ನಾಪತ್ತೆಯಾಗಿರುವ ಎಸ್ಡಿಎ ಹೆಸರು ರವಿ ತಾವರಖೇಡ ಆಗಿದ್ದು ಅವರು ವಿಜಯಪುರ ಮೂಲದವರೆಂದು ಹೇಳಿದ್ದಾರೆ. ರವಿ ಮತ್ತು ಅವರ ಪತ್ನಿಗೆ ಫೋನ್ ಮಾಡಿದಾಗ ಇಬ್ಬರೂ ಒಂದೊಂದು ದಿನದ ಸಮಯ ಕೇಳಿದ್ದಾರೆ. ಆದರೆ ಇದುವರೆಗೆ ಹಣದ ಜೊತೆ ರವಿ ವಾಪಸ್ಸಾಗಿಲ್ಲ ಎಂದು ಆರ್ ಟಿ ಓ ತಿಳಿಸಿದ್ದಾರೆ..