ಕಲಬುರಗಿ: ನಗರದಲ್ಲಿ ದಸರಾ ಶುಭಾಶಯ ಪ್ಲೇಕ್ಸ್ಗಳು ಹರಿದ ಕಿಡಗೇಡಿಗಳು: ಸೂರ್ಯವಂಶಿ ಕ್ಷತ್ರಿಯ ಖಾಟಿಕ್ ಸಮಾಜದ ಆಕ್ರೋಶ, ತಪ್ಪಿತಸ್ಥರ ಬಂಧನಕ್ಕೆ ಆಗ್ರಹ
ಕಲಬುರಗಿಯ ಬಾಂಬೂ ಬಜಾರ್ ಅಂಬಾ ಭವಾನಿ ದೇವಸ್ಥಾನ ಹತ್ತಿರ ಸಮಾಜದ ಮುಖಂಡರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ ಖರ್ಗೆ, ಶಾಸಕಿ ಕನ್ನಿಸ್ ಫಾತಿಮಾ ಅವರ ಫೋಟೋಗಳನ್ನು ಹೊಂದಿದ ದಸರಾ ಹಬ್ಬದ ಶುಭಾಶಯದ ಫ್ಲೆಕ್ಸ್ ಅಳವಡಿಸಲಾಗಿತ್ತು. ಆದರೆ ಯಾವುದೇ ರಾಜಕೀಯ ಅಥವಾ ಸಮಾಜದ ಕಾರ್ಯಕ್ರಮಕ್ಕೆ ಸಂಬಂಧಿಸದಿದ್ದರೂ, ಕಿಡಿಗೇಡಿಗಳು ಬ್ಯಾನರ್ ಹರಿದು ಹಾಕಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಮೂಲಕ ಇಡೀ ರಾಜ್ಯಕ್ಕೆ ಅವಮಾನವಾಗಿದೆ ಎಂದು ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ತಕ್ಷಣ ತನಿಖೆ ನಡೆಸಿ, ಕೃತ್ಯವೆಸಗಿದ ಕಿಡಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂರ್ಯವಂಶಿ ಕ್ಷತ್ರೀಯ ಖಾಟಿಕ್ ಸಮಾಜದ ಅಧ್ಯಕ್ಷ ನಂದಕುಮಾರ್ ನಾಗಭೂಜಂಗೆ ಆ