ಹೆಗ್ಗಡದೇವನಕೋಟೆ: ಪಟ್ಟಣದಲ್ಲಿ 14 ದಿನಗಳ ಕಾಲ ನಡೆಯುವ ವರದರಾಜಸ್ವಾಮಿ ಬ್ರಹ್ಮರಥೋತ್ಸವಕ್ಕೆ ಚಾಲನೆ
ಹೆಚ್.ಡಿ ಕೋಟೆ ಪಟ್ಟಣದ ಲಕ್ಷ್ಮೀ ವರದರಾಜಸ್ವಾಮಿ ದೇವಸ್ಥಾನದಲ್ಲಿ ಹದಿನಾಲ್ಕು ದಿನಗಳ ಕಾಲ ನಡೆಯುವ ಉತ್ಸವಾದಿ ಪೂಜಾ ಕೈಂಕರ್ಯಗಳು ಹಾಗೂ ಬ್ರಹ್ಮರಥೋತ್ಸವದ ಕಾರ್ಯಕ್ರಮಗಳಿಗೆ ಶುಕ್ರವಾರ ಚಾಲನೆ ದೊರೆಯಿತು. ಲಕ್ಷ್ಮಿ ಸಮೇತ ವರದರಾಜ ಸ್ವಾಮಿಗೆ ಅಭಿಷೇಕ ಹಾಗೂ ಮಹಾಮಂಗಳಾರತಿ, ಅಂಕುರಾರ್ಪಣೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಪಟ್ಟಣದ ವಿಪ್ರ ಸಮಾಜದವರು ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.