ಹೆಗ್ಗಡದೇವನಕೋಟೆ: ವಾಯು ವಿಹಾರಕ್ಕೆ ತೆರಳಿದ್ದ ವ್ಯಕ್ತಿಯೋರ್ವನ ಮೇಲೆ ಹಂದಿ ದಾಳಿ : ಬೀಚನಹಳ್ಳಿ ಗ್ರಾಮದಲ್ಲಿ ಘಟನೆ
ಹೆಚ್ ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ನಿವಾಸಿಯಾದ ಶಿವಮಲ್ಲು ಎಂಬ ವ್ಯಕ್ತಿಯು ಶನಿವಾರ ಬೆಳಿಗ್ಗೆ ಎಂಟರ ಸಮಯದಲ್ಲಿ ಕಬಿನಿ ಎಡದಂಡೆ ನಾಲೆಯ ಮುಖ್ಯರಸ್ತೆಯ ಬಳಿ ವಾಯು ವಿಹಾರ ಮಾಡುತ್ತಿದ್ದ ವೇಳೆ, ಏಕಾಏಕಿ ಕಾಡು ಹಂದಿ ದಾಳಿ ಮಾಡಿದ ಪರಿಣಾಮ ಶಿವಮಲ್ಲು ಅವರ ಬಲದ ಕಾಲು ತೀವ್ರವಾಗಿ ಗಾಯಗೊಂಡು ಬಲದ ಕೈ ಮೂಳೆ ಮುರಿದು ರಸ್ತೆ ಬದಿಯಲ್ಲಿ ಒದ್ದಾಡುತ್ತಿದ್ದುದ್ದನ್ನು ಕಂಡು ಗ್ರಾಮಸ್ಥರು ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಸರಗೂರಿನ ವಿವೇಕಾನಂದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.