ಪಂಚಮಸಾಲಿ ಸಮಾಜದ ಮೇಲೆ ಈ ಹಿಂದೆ ನಡೆದ ಲಾಠಿ ಚಾರ್ಜ್ ಘಟನೆ ನೆನಪಿಸುವ ನಿಟ್ಟಿನಲ್ಲಿ ಬರುವ ಡಿ.10,ರಂದು ಬೆಳಗಾವಿಯ ಮಹಾತ್ಮಾ ಗಾಂಧಿ ಭವನದಿಂದ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗಲೀಕರ್ ಅವರು ಹೇಳಿದ್ದಾರೆ.ಮಹಲಿಂಗಪುರ ಪಟ್ಟಣದಲ್ಲಿ ಮಾತನಾಡಿರುವ ಅವರು,ಕಳೆದ ಬಾರಿ ಅಧಿವೇಶನದ ವೇಳೆ ಪಂಚಮಸಾಲಿ ಸಮಾಜದ ಬಾಂಧವರು ೨ಎ ಮೀಸಲಾತಿ ಹೋರಾಟ ನಡೆಸಿದ ಸಂದರ್ಭದಲ್ಲಿ ಸರ್ಕಾರ ಅನಾವಶ್ಯಕವಾಗಿ ಲಾಠಿ ಜಾರ್ಜ್ ಮಾಡಿದ್ದು ಹೇಯ ಕೃತ್ಯ ಎಂದು ಕಿಡಿಕಾರಿದ್ದಾರೆ.