ಸಿರವಾರ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ವಿಜೇತರಾದ ನೂತನ ನಿರ್ದೇಶಕರಿಗೆ ಪಟ್ಟಣದ ಸಿರವಾರ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಮಂಗಳವಾರ 11 ಗಂಟೆಗೆ ಸನ್ಮಾನಿಸಿ ಗೌರವಿಸಲಾಯಿತು. ಸಹಕಾರಿ ಅಧ್ಯಕ್ಷ ಅಯ್ಯನಗೌಡ ಏರಡ್ಡಿ ಮಾತನಾಡಿ, ನೂತನ ನಿರ್ದೇಶಕರು ರೈತರ ಏಳಿಗೆಗೆ ಶ್ರಮಿಸಬೇಕು. ಆರ್ಥಿಕ ಸಾಲದ ಸಹಕಾರ ಮತ್ತು ರೈತರಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಪರಿಚಯಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದರು.