ಕುಣಿಗಲ್: ಸ್ಥಾಯಿ ಸಮಿತಿ ಅಧ್ಯಕ್ಷರನ್ನು ನಿರ್ಲಕ್ಷ್ಯ ಆರೋಪ, ಸಹಿ ಇಲ್ಲದೆ 4 ಲಕ್ಷಕ್ಕೂ ಹೆಚ್ಚಿನ ಬಿಲ್ ಬಿಡುಗಡೆ ಪಟ್ಟಣದಲ್ಲಿ ಸುದ್ದಿಗೋಷ್ಠಿ
ಸ್ಥಾಯಿ ಸಮಿತಿ ಅಧ್ಯಕ್ಷರ ಸಹಿ ಇಲ್ಲದೆ 4 ಲಕ್ಷ ರೂ ಹೆಚ್ಚಿನ ಬಿಲ್ ನೀಡಲಾಗಿದ್ದು ಹಾಗೂ ಕಾಮಗಾರಿಗಳಿಗೆ ಹೆಚ್ಚುವರಿಯಾಗಿ ಎರಡು ಬಾರಿ ಚೆಕ್ ನೀಡಲಾಗಿದೆ ಎಂದು ಕುಣಿಗಲ್ ಪುರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷೆ ಅಸ್ಮಾ ಝಬಿ ಆರೋಪಿಸಿದರು. ಪುರಸಭಾ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು ಸರ್ವಾಧಿಕಾರ ಆಡಳಿತ ನಡೆಸುತ್ತಿದ್ದು ಅಹಿಂದ ವರ್ಗದ ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ ಪಟ್ಟಣದ ಜನರು ಪುರಸಭೆಗೆ ತೆರಿಗೆಯಾಗಿ ಕಟ್ಟುತ್ತಿರುವ ಹಣವನ್ನು ಸದುಪಯೋಗವಾಗುವ ನಿಟ್ಟಿನಲ್ಲಿ ಗಮನಹರಿಸುವುದು ನನ್ನ ಜವಾಬ್ದಾರಿಯಾಗಿದೆ. ತಾವು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿಂದ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿದ್ದೇವೆ ಪುರಸಭೆಯ ಡೀಸೆಲ್ ವೆಚ್ಚ 3.8 ಲಕ್ಷ ಬರುತ್ತಿತ್ತು ಈಗ 2.80 ಲಕ್ಷ ಬರುತಿದೆ ತಿಂಗಳಿಗೆ