ಚಿಕ್ಕಬಳ್ಳಾಪುರ: ಸದ್ಗುರು ಮಧುಸೂದನ ಸಾಯಿಯಿಂದ ಸೇವಾ ಪುರಸ್ಕಾರ ಪ್ರದಾನ
ಶನಿವಾರ ಸಂಜೆ 5 ಗಂಟೆಯಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಅನ್ನಪೂರ್ಣ ಪೌಷ್ಟಿಕ ಆಹಾರ ಯೋಜನೆಗೆ ಬೆಂಬಲ ನೀಡಿದ ಪರಂ ಫ್ಯಾಮಿಲಿ ಫೌಂಡೇಶನ್ ಪ್ರತಿನಿಧಿ ಶ್ರೀ ವಿದ್ಯಾ ಅವರಿಗೆ ‘ಸಿಎಸ್ಆರ್ ಸರ್ಕಲ್ ಆಫ್ ಹಾನರ್’ ಪುರಸ್ಕಾರ ನೀಡಿ ಗೌರವಿಸಿದರು.  ಪರಿಸರ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಸೆನೆಗಲ್ನ ಅಬ್ದುಲ್ ಕರೀಮ್ ಸಾಲ್ ಅವರಿಗೆ ‘ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ ಪುರಸ್ಕಾರ’ ಘೋಷಿಸಲಾಯಿತು. ಅವರ ಪರವಾಗಿ ಅಸ್ನಾಬಾ ಅವರು ಪ್ರಶಸ್ತಿ ಸ್ವೀಕರಿಸಿದರು.