ಸಿಂದಗಿ: ಮೋರಟಗಿ ಚಕ್ ಪೋಸ್ಟ್ ಗೆ ಬೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು
ಆಲಮೇಲ ತಾಲೂಕಿನ ಮೋರಟಗಿಯಲ್ಲಿ ಲೋಕಸಭೆ ಚುನಾವಣೆ ನಿಮಿತ್ತ ನಿರ್ಮಿಸಿದ ಚೆಕ್‌ಪೋಸ್ಟ್ ಗೆ ಗುರುವಾರ ಸಾಯಂಕಾಲ 4:30 ಗಂಟೆಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸೋನವಾನೆ ಋಷಿಕೇಶ ಭಗವಾನ, ಸಹಾಯಕ ಚುನಾವಣಾಧಿಕಾರಿ ವಿನಯ ಪಾಟೀಲ, ತಹಶೀಲ್ದಾರ ಡಾ.ಪ್ರದೀಪಕುಮಾರ ಹಿರೇಮಠ, ಆಲಮೇಲ ತಹಶೀಲ್ದಾರ ಮಹಾದೇವ ಸನಮರಿ ಹಾಗೂ ಸಿಬ್ಬಂದಿಗಳು ಬೇಟಿ ನೀಡಿ ಪರಿಶೀಲಿಸಿದರು.