ಯಲ್ಲಾಪುರ: ಅಡಿಕೆಭವನದಲ್ಲಿ ಅ 24 ರಂದು ವಿಚಾರ ಗೋಷ್ಠಿ,ಅಭಿನಂದನಾ ಕಾರ್ಯಕ್ರಮ
ಯಲ್ಲಾಪುರ: ಅ ೧೬ ರಂಗಸಮೂಹ ಮಂಚಿಕೇರಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಇವರ ಆಶ್ರಯದಲ್ಲಿ ವಿಚಾರಗೋಷ್ಠಿ ಹಾಗೂ ಅಭಿನಂದನೆ ಕಾರ್ಯಕ್ರಮವನ್ನು ಅ.24 ರಂದು ಮಧ್ಯಾಹ್ನ 3 ಕ್ಕೆ ಪಟ್ಟಣದ ಅಡಕೆ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಟ್ಟಣದಲ್ಲಿ ರಂಗಸಮೂಹದ ಅಧ್ಯಕ್ಷ ರಾಮಕೃಷ್ಣ ಭಟ್ಟ ದುಂಡಿ ತಿಳಿಸಿದರು.