ಬೋಗನಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಕೊಚ್ಚಿ ಹೋಗಿ ವರ್ಷ ಕಳೆದರು, ರಸ್ತೆ ಕಾಮಗಾರಿ ಮಾಡಿಲ್ಲ ಎಂಬ ಆರೋಪ PWD ಇಲಾಖೆ ಅಧಿಕಾರಿಗಳ ವಿರುದ್ದ ಕೇಳಿ ಬಂದಿತ್ತು. ಈ ಗಂಭೀರ ಸಮಸ್ಯೆಯ ಕುರಿತು ಪಬ್ಲಿಕ್ ಆ್ಯಪ್ ಸುದ್ದಿಯನ್ನ ಭಿತ್ತರಿಸಿತ್ತು. ಈ ನಡುವೆ ವರದಿ ಭಿತ್ತರಗೊಳಿಸಿದ ಎರಡೇ ದಿನಕ್ಕೆ ಅದೇ ರಸ್ತೆ ಗುಂಡಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ದುರಂತ ಘಟನೆ ಶನಿವಾರ ಬೆಳಿಗ್ಗೆ 11 ಗಂಟೆಗೆ ಬೆಳಕಿಗೆ ಬಂದಿದೆ.ಬಹಿರ್ದೆಸೆಗೆ ಬಂದಿದ್ದ ವ್ಯಕ್ತಿ ಕಾಲು ಜಾರಿ ರಸ್ತೆಯ ಬೃಹತ್ ಗಾತ್ರದ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಬೋಗನಹಳ್ಳಿ ಗ್ರಾಮದಲ್ಲಿ ಈವೊಂದು ಘಟನೆ ಜರುಗಿದೆ. ಗ್ರಾಮದ ಜಯ್ಯಣ್ಣ (50) ಎಂಬ ವ್ಯಕ್ತಿ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.