ಚಿಂತಾಮಣಿ: ಕಂಬಾಲಹಳ್ಳಿ ಗ್ರಾಮದ ಮನೆ ಬಳಿಯ ಮೋಟಾರ್ ಕದ್ದು ಕಳ್ಳರು ಪರಾರಿ
ಕೆಟ್ಟು ನಿಂತಿದ್ದ ಕೊಳವೆ ಬಾವಿಗಳನ್ನು ಕಳ್ಳರು ಕದ್ದು ಎಸ್ಕೇಪ್ ಆಗಿರುವ ಘಟನೆ ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಕಂಬಾಲಹಳ್ಳಿ ಗ್ರಾಮದ ರೈತ ಮಂಜುನಾಥ್ ತಮ್ಮ ಜಮೀನಿನಲ್ಲಿ ಎರಡು ಕೊಳವೆ ಬಾವಿಗಳನ್ನು ಕೊರೆಯಿಸಿದ್ದು ಅದರಿಂದ ಬರುವ ನೀರಿನಲ್ಲಿ ಬೆಳೆಗಳನ್ನು ಇಟ್ಟುಕೊಂಡು ಜೀವನಮಾಡಿಕೊಂಡಿದ್ದರು ಆದರೆ ಕಳೆದ 2 ತಿಂಗಳ ಹಿಂದೆ ಕೊಳವೆ ಬಾವಿಯಲ್ಲಿ ಮೋಟರ್ ಗಳು ಕೆಟ್ಟು ಹೋಗಿದ್ದರಿಂದ 1 ಲಕ್ಷ ಬೆಲೆ ಬಾಳುವ 50 ಹೆಚ್.ಪಿ ಎರಡು ಚೆಕ್ಸ್ ಮೋ ಮೋಟರ್ ಳನ್ನು ತಗೆದು ತನ್ನ ಮನೆಯ ಕಾಂಪೌಂಡ್ ನಲ್ಲಿ ಇಟ್ಟಿದ್ದ ವೇಳೆ ಕಳ್ಳರು ಕದ್ದು ಎಸ್ಕೇಪ್ ಆಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.