ಹಿರಿಯೂರು: ತಾಲ್ಲೂಕಿನ ವಿವಿಧ ಕಡೆ ಸೆ.25 ರಂದು ವಿದ್ಯುತ್ ವ್ಯತ್ಯಯ; ಬೆಸ್ಕಾಂ ಇಲಾಖೆ ಪ್ರಕಟಣೆ
ಹಿರಿಯೂರು ಉಪ ವಿಭಾಗದ ವ್ಯಾಪ್ತಿಯ ಹರಿಯಬ್ಬೆ, ಪಿ.ಡಿ. ಕೋಟೆ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯಿಂದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆ.25ರ ಬೆಳಿಗ್ಗೆ 10 ರಿಂದ ಸಂಜೆ 05 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬುಧವಾರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹರಿಯಬ್ಬೆ, ಧರ್ಮಪುರ, ಶ್ರವಣಗೆರೆ, ಬೆನಕನಹಳ್ಳಿ, ಸಕ್ಕರ, ಕೃಷ್ಣಪುರ, ಸೂಗುರು ಬುರುಡುಕುಂಟೆ, ಚಿಲ್ಲಹಳ್ಳಿ, ಈಶ್ವರಗೆರೆ, ಹೂವಿನಹೊಳೆ, ಅಬ್ಬಿನಹೊಳೆ, ಕಣಜನಹಳ್ಳಿ, ಬೇತೂರು, ಬೇತೂರು ಪಾಳ್ಯ, ವಿ.ಕೆ.ಗುಡ್ಡ, ಖಂಡೆನಹಳ್ಳಿ, ಮದ್ದಿಹಳ್ಳಿ, ಹೊಸಕೆರೆ, ಅರಳಿಕೆರೆ ವಿದ್ಯುತ್ ವ್ಯತ್ಯಯವಾಗಲಿದೆ.