ಶಿರಸಿ: ಅಕ್ರಮ ಮರಳು ಸಾಗಾಟ, ಗಿಡಮಾವಿನಕಟ್ಟೆ ಬಳಿ ಎರಡು ಲಾರಿ ವಶಕ್ಕೆ
ಶಿರಸಿ : ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಅಕ್ರಮ ಮರಳು ಸಾಗಾಟ ಮಾಡಿಕೊಂಡು ಬರುತ್ತಿದ್ದ ಎರಡು ಮಿನಿ ಟಿಪ್ಪರ್ ಲಾರಿಗಳನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ. ಸಿದ್ದಾಪುರ ದಿಂದ ಶಿರಸಿ ಕಡೆಗೆ ಚಾಲಕರಾದ ೧೬ ನೇ ಮೈಲ್ ಗಲ್ಲಿನ ಕಿರಣ್ ಅನಿಲ್ ಪೂಜಾರಿ ಹಾಗೂ ದೀಪಕ್ ಶೇಖರ್ ನಾಯ್ಕ್ ಇವರು ಎರಡು ಮಿನಿ ಟಿಪ್ಪರ್ ಲಾರಿಗಳಲ್ಲಿ ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೇ ಅಕ್ರಮ ವಾಗಿ ಮರಳು ಸಾಗಾಟ ಮಾಡಿಕೊಂಡು ಬಂದಿದ್ದಾರೆ. ಇದನ್ನು ಪೆಟ್ರೋಲಿಂಗ್ ನಲ್ಲಿದ್ದ ಗ್ರಾಮೀಣ ಠಾಣೆ ಪಿಎಸ್ಐ ಸಂತೋಷ್ ತಪಾಸಣೆ ನಡೆಸಿ, ಲಾರಿಗಳನ್ನು ದಸ್ತಗಿರಿ ಮಾಡಿ ದೂರು ದಾಖಲಿಸಿದ್ದಾರೆ.