ಸಂಡೂರು: ತಾಲ್ಲೂಕಿನ ಹಳೇ ದರೋಜಿಯಲ್ಲಿ ಲಾರಿ ಪಲ್ಟಿ : ಸಾಮಗ್ರಿಗಳು ರಸ್ತೆಗೆ ಬಿದ್ದು ಚೆಲ್ಲಪಿಲ್ಲಿ
Sandur, Ballari | Nov 20, 2025 ಹಳೇ ದರೋಜಿಯ ವೀರಭದ್ರೇಶ್ವರ ದೇವಸ್ಥಾನದ ಬಳಿ ಗುರುವಾರ (ನ.20) ಬೆಳಿಗ್ಗೆ 4 ಗಂಟೆಗೆ ಲಾರಿಯೊಂದು ಪಲ್ಟಿಯಾದ ಘಟನೆ ನಡೆದಿದೆ. ಮಾಹಿತಿ ಪ್ರಕಾರ, ಲಾರಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನ ರಸ್ತೆ ಮಧ್ಯೆ ಪಲ್ಟಿಯಾಗಿ ಬಿದ್ದಿದೆ. ಅಪಘಾತದಲ್ಲಿ ಲಾರಿಯ ಹಲವು ಭಾಗಗಳು ಮುರಿದುಹೋಗಿದ್ದು, ಲಾರಿಯಲ್ಲಿ ಇದ್ದ ಸಾಮಗ್ರಿಗಳು ರಸ್ತೆಗೆ ಉರುಳಿಬಿದ್ದಿವೆ. ಅಪಘಾತದ ಸ್ಥಳಕ್ಕೆ ಸ್ಥಳೀಯರು ಧಾವಿಸಿ ನೆರವು ನೀಡಿದರೆ, ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನ