ಚಾಮರಾಜನಗರ ತಾಲೂಕಿನ ನಂಜೇದೇವನಪುರದಲ್ಲಿ 5 ಹುಲಿ ಕಾಣಿಸಿಕೊಂಡ ಘಟನೆ ಸಂಬಂಧ ಅರಣ್ಯ ಇಲಾಖೆ ಸಿಬ್ಬಂದಿ ವಿಶೇಷ ವಾಕ್ ಥ್ರೂ ಕೇಜ್ ಅಳವಡಿಸಿದ್ದು ತುಮಕೂರು ಮಾದರಿ ಬೋನ್ ನ್ನು ಕೂಡ ಇಟ್ಟಿದ್ದಾರೆ. ಹುಲಿ ಸೆರೆ ಕಾರ್ಯಾಚರಣೆಗೆ ದುಬಾರೆ ಆನೆ ಶಿಬಿರದಿಂದ ಈಶ್ವರ್ ಮತ್ತು ಲಕ್ಣ್ಮಣ್ ಆನೆಗಳನ್ನು ಕರೆಯಿಸಿಕೊಂಡಿದ್ದು 100 ಕ್ಕೂ ಅಧಿಕ ಸಿಬ್ಬಂದಿಗಳು, ಪಶು ವೈದ್ಯರು ಇದರಲ್ಲಿ ಭಾಗಿಯಾಗಿದ್ದು ಒಟ್ಟು ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಡಿಸಿಎಫ್ ಶ್ರೀಪತಿ ತಿಳಿಸಿದರು. ವಾಕ್ ಥ್ರೂ ಕೇಜ್ ವಿಶೇಷ ಬೋನಾಗಿದ್ದು ಹುಲಿ ಸಂಚರಿಸುವ ಮಾರ್ಗ ಮಧ್ಯೆ ಇಟ್ಟ ವೇಳೆ ಹುಲಿ ಬಂದ ಕೂಡಲೇ ಲಾಕ್ ಆಗುವ ವಿಶೇಷ ವಿನ್ಯಾಸದ ಬೃಹತ್ ಗಾತ್ರದ ಬೋನಾಗಿದೆ. ಇನ್ನು, ಕೊಟ್ಟಿಗೆ ಮಾದರಿ ಇರುವ ತುಮಕೂರು ಕೇಜ್ ಕೂಡ ಇಡಲಾಗಿದೆ.