ಹೆಗ್ಗಡದೇವನಕೋಟೆ: ಏ.20 ರಂದು ಲಕ್ಷ್ಮೀವರದರಾಜಸ್ವಾಮಿ ಬ್ರಹ್ಮರಥೋತ್ಸವ: ಪಟ್ಟಣದಲ್ಲಿ ರಥೋತ್ಸವ ಮಂಡಳಿ ಕಾರ್ಯದರ್ಶಿ ಚಂದ್ರಮೌಳೇಶ್ವರ
ಪಟ್ಟಣದ ಲಕ್ಷ್ಮೀವರದರಾಜಸ್ವಾಮಿ ರಥೋತ್ಸವ ಅಂಗವಾಗಿ ಏ.20 ರಂದು ಸ್ವಾಮಿಯವರ ಬ್ರಹ್ಮರಥೋತ್ಸವ ಸಂಭ್ರಮ ದಿಂದ ಜರುಗಲಿದೆ ಎಂದು ರಥೋತ್ಸವ ನಿರ್ವಹಣಾ ಮಂಡಳಿ ಕಾರ್ಯದರ್ಶಿ ಚಂದ್ರಮೌಳೇಶ್ವರ ಮಾಹಿತಿ ನೀಡಿದರು. ಪಟ್ಟಣದಲ್ಲಿ ಶನಿವಾರ ಮಾತನಾಡಿದ ಅವರು, ರಥೋತ್ಸವವು ವರದರಾಜಸ್ವಾಮಿ ದೇವಾಲಯದಿಂದ ಹೊರಟು ಮೊದಲನೇ ಮುಖ್ಯರಸ್ತೆ, ಬಸ್ ನಿಲ್ದಾಣ, ದ್ವಿತೀಯ ಮುಖ್ಯರಸ್ತೆ ಮೂಲಕ ಸಾಗಿ ದೇವಾಲಯದ ಮುಂಭಾಗಕ್ಕೆ ಆಗಮಿಸಿ ಸಮಾರೋಪಗೊಳ್ಳಲಿದೆ ಎಂದರು. ರಥೋತ್ಸವ ಮಂಡಳಿ ಅಧ್ಯಕ್ಷ ನಾಗಣ್ಣ ಮಾತನಾಡಿ, ಈ ಬಾರಿಯ ರಥೋತ್ಸವದಲ್ಲಿ ಐದಾರು ಕಲಾತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.