ಬಳ್ಳಾರಿ: ಇಡಿಯವ್ರಿಗೆ ಸಹಕಾರ ನೀಡಿದ್ದೇನೆ, ನನ್ನಿಂದ ಒಂದು ತುಂಡು ಸೀಜ್ ಮಾಡಿಲ್ಲ ; ನಗರದಲ್ಲಿ ಶಾಸಕ ನಾರಾ ಭರತ್ ರೆಡ್ಡಿ
ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಹಾಗೂ ನಮ್ಮ ಬ್ಯುಸಿನೆಸ್ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದು, ಇಡಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಲಾಗಿದೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು. ಬಳ್ಳಾರಿ ನಗರದ ನೆಹರೂ ಕಾಲನಿಯಲ್ಲಿರುವ ನಿವಾಸದಲ್ಲಿ ಇಡಿ ದಾಳಿ ಅಂತ್ಯದ ಬಳಿಕ ಸುದ್ದಿಗಾರರೊಂದಿಗೆ ಬುದುವಾರ ಮಾತನಾಡಿದರು. ದಾಳಿ ವೇಳೆ ನನ್ನ ಮನೆಯಲ್ಲಿ ಒಂದು ತುಂಡನ್ನೂ ಸೀಸ್ ಮಾಡಿಲ್ಲ. ಪಂಚನಾಮೆ ಮಾಡಿದ್ದಾರೆ, ಅದರಲ್ಲಿ ಕ್ಲಿಯರ್ಆಗಿ ತಿಳಿಸಿದ್ದಾರೆ ಏನನ್ನೂ ವಶಪಡಿಸಿಕೊಂಡಿಲ್ಲ ಅಂತ. ಆದರೆ, 40-50 ಕೋಟಿ ಸೀಸ್ ಅಂತಾ ಊಹಾಪೊಹ ಹರಿದಾಡುತ್ತಿದೆ ಎಂದ್ರು...