ಜೋಯಿಡಾ : ಶಿರಸಿಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಜೋಯಿಡಾದ ಸರಕಾರಿ ಶ್ರೀರಾಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಶ್ರಾವಣಿ ಮಹೇಂದ್ರ ಹರ್ಚಿಕರ ಇವಳು ಭಾವಗೀತೆ ಮತ್ತು ಗಝಲ್ ಸ್ಪರ್ಧೆಗಳೆರಡರಲ್ಲಿಯೂ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಎಂದು ಸರಕಾರಿ ಶ್ರೀರಾಮ ಪ್ರೌಢಶಾಲೆಯು ಇಂದು ಶನಿವಾರ ಮಧ್ಯಾಹ್ನ 12:30 ಗಂಟೆಗೆ ಮಾಧ್ಯಮಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ. ಇವಳು ಜೋಯಿಡಾದ ಕಲಾವಿದ ಮಹೇಂದ್ರ ಬಾಲಚಂದ್ರ ಹರ್ಚಿಕರ ಮತ್ತು ಪ್ರತಿಭಾ ದಂಪತಿಗಳ ಸುಪುತ್ರಿಗಿದ್ದಾಳೆ. ರಾಜ್ಯಮಟ್ಟಕ್ಕೆ ಆಯ್ಕೆಯಾದ ಶ್ರಾವಣಿ ಮಹೇಂದ್ರ ಹರ್ಚಿಕರ ಇವಳನ್ನು ಇಂದು ಶನಿವಾರ ಶಾಲಾಭಿವೃದ್ಧಿ ಸಮಿತಿ ಮತ್ತು ಶಾಲೆಯ ವತಿಯಿಂದ ಸನ್ಮಾನಿಸಲಾಯ್ತು.