ಕಲಬುರಗಿ: ನೀರು ನುಗ್ಗಿ ಜಟ್ಟೂರು ಗ್ರಾಮದಲ್ಲಿ 42 ಹಸುಗಳು ಸಾವು ಪ್ರಕರಣ: ಸಚಿವ ಶರಣಪ್ರಕಾಶ ಪಾಟೀಲ್ ಭೇಟಿ, ಹಲವು ಗ್ರಾಮದ ಜನರಿಗೆ ಧೈರ್ಯ ತುಂಬಿದ ಸಚಿವರು
ನಿರಂತರ ಮಳೆ ಹಾಗೂ ಕಾಗಿನಾ ಮುಲ್ಲಾಮಾರಿ ಚಂದ್ರಂಪಳ್ಳಿ ನೀರಿನಿಂದ ಸೇಡಂ, ಚಿಂಚೋಳಿ ಹಾಗೂ ಕಾಳಗಿ ತಾಲೂಕಿನ ಹಲವಡೆ ಅವಘಡಗಳು ಸಂಭವಿಸಿದ್ದು ಸಚಿವ ಡಾ. ಶರಣಪ್ರಕಾಶ ಪಾಟೀಲ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಂಚೋಳಿ ತಾಲೂಕಿನ ಜಟ್ಟೂರು ಗ್ರಾಮದ ಗೋಶಾಲೆಯಲ್ಲಿ 42 ಹಸುಗಳು ಮೃತಪಟ್ಟ ಹಿನ್ನಲೆ ಸ್ಥಳಕ್ಕೆ ಸಚಿವರು ಭೇಟಿ ನೀಡಿ ಭಾವುಕರಾದರು. ಅದರಂತೆ ಮಳಖೇಡ, ಸಮಖೇಡ ತಾಂಡಾ, ಕೋಲಿವಾಡ, ದರ್ಗಾ ಕಾಲೋನಿ ಸೇರಿದಂತೆ ಹಲವಾರು ಹಾನಿಗೊಳಗಾದ ಮನೆಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿ ತಕ್ಷಣ ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇನ್ನು ಬೀರನಳ್ಳಿ, ಮೀನಹಾಬಳ, ಯಡಗಾ, ಕುಕ್ಕುಂದಾ, ಕಾಚೂರು ಸೇರಿದಂತೆ ಅನೇಕ ಗ್ರಾಮಗಳಿಗೆ ಭೇಟಿ ನೀಡಿದ