ಹುಬ್ಬಳ್ಳಿ: ವೆಂಕಟೇಶ ಅಶೋಕ ಕಾಟವೆ (ವಿಎಕೆ) ಫೌಂಡೇಶನ್ ವತಿಯಿಂದ ನಗರದ ವಿದ್ಯಾನಗರದಲ್ಲಿರುವ ಕೆಎಲ್ ಇ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ವೆಂಕಟೇಶ ಕಾಟವೆ ಹೇಳಿದರು.ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ.೧೪ ರಂದು ಬೆಳಿಗ್ಗೆ ೯ಕ್ಕೆ ಉದ್ಯೋಗ ಮೇಳ ಜರುಗಲಿದ್ದು, ೭೦ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿದ್ದು, ಎರಡು ಸಾವಿರಕ್ಕೂ ಅಧಿಕ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ಎಂದರು.ಮೇಳದಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್, ಎಂ ಟೆಕ್, ಬಿ ಎಡ್, ಡಿ ಎಡ್, ಸ್ನಾತಕೋತ್ತರ ಪದವಿ, ಜಿಎನ್ ಎಂ, ಬಿಎಸ್ ಸಿ ನರ್ಸಿಂಗ್ ಸೇರಿದಂತೆ ವಿವಿಧ ವ್ಯಾಸಂಗ ಹೊಂದಿರುವ ಅಭ್ಯರ್ಥಿಗ