ರಾಷ್ಟ್ರೀಯ ರೈತರ ದಿನಾಚರಣೆ ಅಂಗವಾಗಿ ಬೆಂಗಳೂರಿನ ಯಲಹಂಕದಲ್ಲಿರುವ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ (ICAR–NBAIR) ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪರಿಶಿಷ್ಟ ಜಾತಿಗಳ ಅಭಿವೃದ್ಧಿ ಕ್ರಿಯಾ ಯೋಜನೆ (DAPSC) ಅಡಿಯಲ್ಲಿ ರೈತರಿಗೆ ಜೈವಿಕ ಕೀಟ ನಿಯಂತ್ರಣ ಪರಿಕರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ. ಎಸ್. ಎನ್. ಸುಶೀಲ್, ಡಾ. ಸುಧಾಕರ ಕೆ ಮತ್ತು ಅನೇಕ ಕೃಷಿ ವಿಜ್ಞಾನಿಗಳು, ರೈತರು ಪಾಲ್ಗೊಂಡಿದ್ದರು. ರೈತರ ಜೈವಿಕ ಕೀಟ ನಿರ್ವಹಣೆ ಬಗ್ಗೆ ಮಾಹಿತಿ ನೀಡಲಾಗಿದ್ದು, ಇಂತಹ ಕಾರ್ಯಕ್ರಮಗಳು ಕೃಷಿ ಜ್ಞಾನ ಮತ್ತು ಪ್ರಾಯೋಗಿಕ ನೆರವನ್ನು ತರುವಲ್ಲಿ ಮಹತ್ವಪೂರ್ಣವೆಂದು ತಿಳಿಸಿತು.