ಹುಬ್ಬಳ್ಳಿ ನಗರ: ಅ.೧೭ ರಂದು ಉಚಿತ ನಾಟಕ ಪ್ರದರ್ಶನ: ನಗರದಲ್ಲಿ ಧಾರವಾಡ ರಂಗಾಯಣ ಮಾಜಿ ನಿರ್ದೇಶಕರಾದ ಸುಭಾಷ್ ನರೇಂದ್ರ
ಹುಬ್ಬಳ್ಳಿ: ಸುನಿಧಿ ಕಲಾ ಸೌರಭ ಅಭಿನಯಿಸಿರುವ 'ಮಹಾರಾಣಿ ಅಹಿಲ್ಯಾಬಾಯಿ ಹೊಳ್ಕರ್' ಉಚಿತ ನಾಟಕ ಪ್ರದರ್ಶನವನ್ನು ಅಕ್ಟೋಬರ್ ೧೭ ರಂದು ಸಂಜೆ ೬ ಗಂಟೆಗೆ ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡ ರಂಗಾಯಣ ಮಾಜಿ ನಿರ್ದೇಶಕರಾದ ಸುಭಾಷ್ ನರೇಂದ್ರ ತಿಳಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಮಹಾರಾಣಿ ಅಹಿಲ್ಯಾಬಾಯಿ ಹೊಳ್ಕರ್ ಅವರ ೩೦೦ ನೇ ಜನ್ಮದಿನದ ನಿಮಿತ್ತವಾಗಿ ಸುನಿಧಿ ಕಲಾ ಸೌರಭ ವತಿಯಿಂದ ಈ ನಾಟಕ ಪ್ರದರ್ಶನ ಇರಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಅದಮ್ಯ ಚೇತನ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತಕುಮಾರ ನೆರವೇರಿಸಲಿದ್ದಾರೆ.