ಬಳ್ಳಾರಿ: ನಗರದ ವಡ್ಡರಬಂಡೆ ಪ್ರದೇಶ ಬಲಿಜ ಭವನ ಹತ್ತಿರದ ಜಾಗದಲ್ಲಿ ಕುಡುಕರ ಹಾವಳಿ
ನಗರದ ವಡ್ಡರಬಂಡೆ ಪ್ರದೇಶ ಬಲಿಜ ಭವನ ಹತ್ತಿರ ಜಾಗದಲ್ಲಿ ಕತ್ತಲಾಗುತ್ತಲೇ ಕುಡುಕರ ಹಾವಳಿ ಹೆಚ್ಚಿದೆ. ರಸ್ತೆಯಲ್ಲಿಯೇ ಬಾಟಲ್ಗಳನ್ನು ಒಡೆದು ಕುಡುಕರು ರಂಪಾಟ ಮಾಡುತ್ತಾರೆ. ರಾತ್ರಿ 10 ಗಂಟೆ ಹೊತ್ತಿಗೆ ಎಲ್ಲೆಡೆ ಬಾರ್, ವೈನ್ಶಾಪ್ಗಳು ಬಂದ್ ಆದರೂ ಈ ಪ್ರದೇಶದಲ್ಲಿ ಕುಡುಕರ ಹಾವಳಿ ಮಾತ್ರ ರಾತ್ರಿಯಿಡೀ ಮುಂದುವರಿಯುತ್ತದೆ. ಅಲ್ಲೇ ಮಲಗುವುದು, ಅಲ್ಲೇ ಊಟ, ಅಲ್ಲೇ ಮದ್ಯ ಸೇವನೆ, ಅಲ್ಲಿಯೇ ಜೂಜಾಡುತ್ತಾರೆ. ಮತ್ತೆ ವಿನಾಕಾರಣ ಗಲಾಟೆ ಮಾಡಿಕೊಳ್ಳುತ್ತಾರೆ. ಇವರು ಕುಡಿದ ಮದ್ಯದ ಬಾಟಲಿ, ತಿಂದ ವಸ್ತುಗಳನ್ನು ಅಲ್ಲಿಯೇ ಎಸೆದು ಗಲೀಜು ಮಾಡುತ್ತಿದ್ದಾರೆ. ಒಟ್ಟಾರೆ ರಾತ್ರಿಯಾಗುತ್ತಿದ್ದಂತೆ ಈ ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.ಇತ್ತ ಪೊಲೀಸ್ ಸಿಬ್ಬಂದಿ ಸಹ ಸುಳಿಯದ್ದರಿಂದ ಅನೈತಿಕ ಚಟುವಟಿಕೆಗಳು ಹೆಚ್ಚ