ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲ್ಲೂಕಿನ ಕಲ್ಲುಕಂಭ ಗ್ರಾಮದ ವ್ಯಕ್ತಿ ಕಾಣೆ: ಪತ್ತೆಗೆ ಪೋಲಿಸರು ಮನವಿ
ಕುರುಗೋಡು ತಾಲ್ಲೂಕಿನ ಕಲ್ಲುಕಂಭ ಗ್ರಾಮದ ನಿವಾಸಿ ಶಿವಾನಂದ ಎನ್ನುವ 31 ವರ್ಷದ ವ್ಯಕ್ತಿಯು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದು, ಸೆ.08 ರಂದು ಹೊರಗಡೆ ಹೋಗಿಬರುತ್ತೇನೆ ಎಂದು ಹೇಳಿಹೋದವ ಮರಳಿ ಬಾರದೇ ಕಾಣೆಯಾಗಿದ್ದು, ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ತೆಗೆ ಸಹಕರಿಸಬೇಕು ಎಂದು ಪಿಎಸ್ಐ ಮನವಿ ಮಾಡಿದ್ದಾರೆ. ಚಹರೆ: ಅಂದಾಜು 5.9 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಬಲಕೈಯಲ್ಲಿ ಎಸ್.ವಿ ಎಂದು ಇಂಗ್ಲೀಷ್ನಲ್ಲಿ ಅಚ್ಚೆ ಮತ್ತು ಎಡಕೈನಲ್ಲಿ ಕಾವೇರಿ ಎಂದು ಕನ್ನಡದಲ್ಲಿ ಅಚ್ಚೆ ಹಾಕಿಸಿಕೊಂಡಿರುತ್ತಾನೆ. ಬಲಗಣ್ಣು ಉಬ್ಬಿನ ಹತ್ತಿರ ಹಳೆ ಗಾಯದ ಗುರುತು ಇರುತ್ತದೆ. ಕಾಣೆಯಾದ ಸಂದರ್ಭದಲ