ಬಾಗೇಪಲ್ಲಿ: ಜಿವಿಎಸ್ ಬಡಾವಣೆಗೆ ಮೂಲಭೂತ ಸೌಲಭ್ಯಗಳಿಗಾಗಿ ತಹಶೀಲ್ದಾರರ ಕಚೇರಿ ಮುಂದೆ ಪ್ರತಿಭಟನೆ
ಪಟ್ಟಣಕ್ಕೆ ಹೊಂದಿಕೊಂಡಿರುವ ಜಿ.ವಿ ಶ್ರೀರಾಮರೆಡ್ಡಿ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಹಾಗೂ ಪುರಸಭೆ ಮತ್ತು ಪರಗೋಡ ಗ್ರಾಮ ಪಂಚಾಯತಿಗಳ ತಿಕ್ಕಾಟದಲ್ಲಿ ನಾಗರೀಕರಿಗೆ ನರಕಯಾತೆ ಅನುಭವಿಸುತ್ತಿದ್ದು, ಕೂಡಲೇ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಸಿಪಿಐಎಂ ಮುಖಂಡ ಡಿ.ಟಿ ಮುನಿಸ್ವಾಮಿ ಆಗ್ರಹಿಸಿದರು. ಪಟ್ಟಣದ ತಹಶೀಲ್ದಾರರ ಕಚೇರಿಯ ಮುಂದೆ ಬುಧವಾರ ಜಿವಿಎಸ್ ಬಡಾವಣೆಯ ನಿವಾಸಿಗಳ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಪಿಐಎಂ ಪಕ್ಷ ಮತ್ತು ಶ್ರೀರಾಮರೆಡ್ಡಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.